
30th September 2025
"ಸಾಹಿತಿ ಡಾ.ಸುಧಾಕರ್ ಗೆ ಸನ್ಮಾನ"
ಶಿವಮೊಗ್ಗ:ಕುವೆಂಪು ವಿಶ್ವವಿದ್ಯಾಲಯ,ಜ್ಞಾನ ಸಹ್ಯಾದ್ರಿ,ಶಂಕರಘಟ್ಟ, ಶಿವಮೊಗ್ಗ.ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ದೈಹಿಕ ಮತ್ತು ಆರೋಗ್ಯ ಶಿಕ್ಷಣದ ಲೇಖಕ,ಸಾಹಿತಿ,ಅಂಕಣಕಾರ ವಿಶ್ವವಿದ್ಯಾನಿಲಯದ ಹಿರಿಯ ವಿದ್ಯಾರ್ಥಿ,ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ (ರಿ,.)ಸಿರಿಗೆರೆ. ಹೊನ್ನಾಳಿ ತಾಲೂಕು, ಬೆನಕನಹಳ್ಳಿಯ ಶ್ರೀ ವಿನಾಯಕ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಡಾ.ಸುಧಾಕರ್.ಜಿ.ಲಕ್ಕವಳ್ಳಿ.ಇವರನ್ನು ಸನ್ಮಾನಿಸಲಾಯಿತು.
ಸೆ,26 ರಂದು ಸಂಶೋಧನಾರ್ಥಿ ಸಂಜೀವ್ ಕುಮಾರ್ ಇವರ ಸಂಶೋಧನಾ ಪ್ರಬಂಧ ಮಂಡನೆ ಕಾರ್ಯಕ್ರಮದಲ್ಲಿ ಡಾ.ಸುಧಾಕರ್ ಇವರನ್ನು ಗೌರವಿಸಲಾಯಿತು.
ದೈಹಿಕ ಶಿಕ್ಷಣ ಸಾಹಿತ್ಯ ಕ್ಷೇತ್ರಕ್ಕೆ ಈಗಾಗಲೇ ಬರಹಗಳ ಮೂಲಕ
ಕೊಡುಗೆಗಳನ್ನು ನೀಡುತ್ತಿರುವ ಡಾ.ಸುಧಾಕರ್ ರವರು ಮುಂದೆಯೂ ಬರವಣಿಗೆ ಮುಂದುವರಿಸಲಿ,ಪ್ರಸ್ತುತ ದೈಹಿಕ ಶಿಕ್ಷಣ ವಿಷಯದಲ್ಲಿ ಕನ್ನಡ ಬರಹಗಳ ಅವಶ್ಯಕತೆ ಇದೆ ಇದು ಕಲಿಕಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸದುಪಯೋಗವಾಗುತ್ತದೆ ಎಂದು ಸಹಾಯಕ ನಿರ್ದೇಶಕರಾದ ಡಾ.ರವೀಂದ್ರ ಗೌಡ ಎಸ್,ಎಂ.ತಿಳಿಸಿದರು.
ಸದರಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಸುಧಾಕರ್ ಶಿಕ್ಷಕರ,ಗುರುಗಳ ಕೃಪೆಯಿಂದ ಎಲ್ಲವೂ ಸಾಧ್ಯ ಈ ಮಟ್ಟದ ಬೆಳವಣಿಗೆಗೆ ಅವರು ನೀಡಿದ ಅಕ್ಷರ ಜ್ಞಾನ ಹಾಗೂ ಮಾರ್ಗದರ್ಶನ ಸಹಕಾರಿಯಾಗಿದೆ.ದೈಹಿಕ ಶಿಕ್ಷಣ ವಿಭಾಗವನ್ನು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಆರಂಭಿಸಿದ ಪ್ರಥಮ ಅಧ್ಯಕ್ಷರಾದ ದಿವಂಗತ ಹಳ್ಳದ್ ಸರ್ ರವರನ್ನು ನೆನೆದು,ನನ್ನ ಬೆಳವಣಿಗೆಗೆ ಸಹಕರಿಸಿದ,ಸಹಕರಿಸುತ್ತಿರುವ ಶಿಕ್ಷಕರಿಗೆ,ಕುಟುಂಬ ವರ್ಗ, ಸ್ನೇಹಿತರಿಗೂ,ಪತ್ರಿಕಾ ಸಂಪಾದಕರಿಗೆ, ಹಿರಿಯ ಮತ್ತು ಕಿರಿಯರಿಗೆ ನಾನು ಕೃತಜ್ಞ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ.ಎನ್,ಡಿ.ವಿರುಪಾಕ್ಷರವರು,ಗುಲ್ಬರ್ಗ ವಿಶ್ವವಿದ್ಯಾನಿಲಯದ ಕುಲಸಚಿವರು ಪರೀಕ್ಷಾಂಗ ವಿಭಾಗ
ಹಾಗೂ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಪ್ರೊ,ನಿಂಗಪ್ಪ
ಕಣ್ಣೂರ್ ರವರು,ದೈಹಿಕ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಪ್ರೊ,ಗಜಾನನ ಪ್ರಭು ರವರು,ಸಹಾಯಕ ನಿರ್ದೇಶಕರಾದ ಡಾ.ರವೀಂದ್ರ ಗೌಡ ಎಸ್,ಎಂ.ರವರು,ಡಾ.ಬಸವರಾಜ್ ಕುಂಸಿ.ಬಾಲಾಜಿ ವಿಶ್ವವಿದ್ಯಾನಿಲಯ,ಪುಣೆ. ಡಾ. ನಾಗರಾಜ್ ದಾಸರ ಬಳ್ಳಾರಿ,ವಿಭಾಗದ ಸಂಶೋಧನಾರ್ಥಿಗಳು,ಹಿರಿಯ ವಿದ್ಯಾರ್ಥಿಗಳು ಹಾಗೂ ಪ್ರಸಕ್ತ ಸಾಲಿನ ಎಂ,ಪಿ,ಇಡಿ. ವಿದ್ಯಾರ್ಥಿಗಳು ಹಾಜರಿದ್ದು ವಿಭಾಗದ ಸಹಾಯಕ ನಿರ್ದೇಶಕರಾದ ಡಾ.ರವೀಂದ್ರ ಗೌಡ ರವರು ಸ್ವಾಗತಿಸಿ ಸಂಜೀವ್ ಕುಮಾರ್ ವಂದಿಸಿದರು.
ಬಡ ವ್ಯಾಪಾರಿಗಳು ಜೀವನೋಪಾಯ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ : ಎಸ್. ದೇವಾನಂದ
ಮುತ್ತಗಾ ಗ್ರಾಮದಲ್ಲಿ ಕೂಲಿ ಸಮಾಜದ ಮಹಾ ಶರಣ, ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ಅಪಮಾನ ಮಾಡಿದವರನ್ನು ಬಂಧಿಸುವಂತೆ ಹಲವು ಭಾರಿ ಒತ್ತಾಯ ಮಾಡಿದರೂ ಯಾವುದೇ ಕ್ರಮಕೈಗೊಳ್ಳದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಶ್ನೆ ಮಾಡಿದವರನ್ನು ಬಂಧಿಸುವುದು ಯಾವ ನ್ಯಾಯ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ